ವಿಷಯದ ವಿವರಗಳಿಗೆ ದಾಟಿರಿ

ಜನವರಿ 16, 2011

22

ನಮ್ಮ ರಾಷ್ಟ್ರಧ್ವಜ ಅಲ್ಲಿ ಹಾರಬಾರದಾ?

‍ರಾಕೇಶ್ ಶೆಟ್ಟಿ ಮೂಲಕ

ರಾಕೇಶ್ ಶೆಟ್ಟಿ

ವಿಶ್ವಸಂಸ್ಥೆಯಲ್ಲಿ ಭಾರತೀಯ ರಾಯಭಾರಿ ಭಾಷಣ ಶುರು ಮಾಡುತ್ತಾ,

“ನಾನು ಕಾಶ್ಮೀರ ಸಮಸ್ಯೆಯ ಬಗ್ಗೆ ಮಾತನಾಡುವುದಕ್ಕಿಂತ ಮೊದಲು ‘ಋಷಿ ಕಶ್ಯಪ’ರ ಬಗ್ಗೆ ಹೇಳಲಿಚ್ಛಿಸುತ್ತೇನೆ. ಅವರಿಂದಾಗಿಯೇ ಕಣಿವೆಗೆ ‘ಕಾಶ್ಮೀರ’ ಎಂಬ ಹೆಸರು ಬಂತು. ಒಮ್ಮೆ ಅವರು ಹೀಗೆ ಕಾಶ್ಮೀರ ಕಣಿವೆಯಲ್ಲಿ ಸಾಗುವಾಗ ‘ಕಲ್ಲು ಬಂಡೆ’ಗಳ ನಡುವೆ ಹರಿಯುತಿದ್ದ ಜಲಧಾರೆಯನ್ನು ನೋಡಿ, ಸ್ನಾನ ಮಾಡುವ ಮನಸ್ಸಾಯಿತು. ಬಟ್ಟೆಯನ್ನು ಕಳಚಿ ಬಂಡೆಗಳ ಮೇಲಿಟ್ಟು ‘ಕಶ್ಯಪ’ರು ಸ್ನಾನ ಮುಗಿಸಿ ನೋಡಿದರೆ, ಅವರು ಬಂಡೆಯ ಮೇಲಿಟ್ಟಿದ್ದ ‘ಬಟ್ಟೆ’ಯನ್ನು ‘ಪಾಕಿಸ್ತಾನಿ’ಯೊಬ್ಬ ಕದ್ದೊಯ್ದಿದ್ದ!”

ಅವರು ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ‘ಪಾಕಿಸ್ತಾನಿ ರಾಯಭಾರಿ’ ಕುಳಿತಲ್ಲಿಂದ ಚಂಗನೆ ಜಿಗಿದೆದ್ದು,
“ನೀವ್ ಏನ್ ಮಾತಾಡ್ತಾ ಇದ್ದೀರಾ? ಆ ಕಾಲದಲ್ಲಿ ‘ಪಾಕಿಸ್ತಾನಿ’ಗಳು ‘ಕಾಶ್ಮೀರ’ದಲ್ಲಿ ಇರಲೇ ಇಲ್ಲ!! ”

ನಸು ನಕ್ಕ ಭಾರತೀಯ ರಾಯಭಾರಿ, “ಕಾಶ್ಮೀರ ಯಾರಿಗೆ ಸೇರಿದ್ದು ಅನ್ನೋ ವಿಷಯವನ್ನ ಸ್ಪಷ್ಟಪಡಿಸಿರುವುದರಿಂದ ನಾನು ನನ್ನ ಮಾತನ್ನು ಮುಂದುವರೆಸುತ್ತೇನೆ” 🙂
(‘ಕಾಶ್ಮೀರ’ಕ್ಕೆ ಸಂಬಂಧಿಸಿದಂತೆ ‘ವಿಶ್ವ ಸಂಸ್ಥೆ’ಯಲ್ಲಿ ನಡೆದ ಘಟನೆಯಿದು ಅನ್ನೋ ಮಿಂಚೆಯಲ್ಲಿ ಬಂದ ಜೋಕ್ ಇದು)

Jokes Apart…

ಕಾಶ್ಮೀರ!

ಕಾಶ್ಮೀರ ಅಂದಾಕ್ಷಣ ಕಣ್ಣೆದುರು ಬರುವುದು ಅದೇ ಪಾಕೀಸ್ತಾನ-ಭಾರತ,ಉಗ್ರಗಾಮಿಗಳು,ನೆಲೆ ಕಳೆದುಕೊಂಡ ಪಂಡಿತರು ಮತ್ತು ಕಲ್ಲು ತೂರಾಟ ಅಲ್ವಾ? ಒಮ್ಮೊಮ್ಮೆ ಕಲ್ಲು ತೂರುವ ಕಾಶ್ಮೀರಿ ಹುಡುಗರ ಮೇಲೆ ಕೋಪ ಬಂದರೆ, ಮರುಕ್ಷಣ ಆ ಹುಡುಗರ ಕಲ್ಲೇಟಿಗೆ ತುತ್ತಾಗೋ ನಮ್ಮ ಯೋಧರೆಡೆಗೆ ಮನ ಮಿಡಿಯುತ್ತದೆ, ಮತ್ತದೆ ಯೋಧರ ಪಾಡು ನೆನೆಸಿಕೊಂಡು, ಇಷ್ಟೆಲ್ಲಾ ಕಷ್ಟಪಟ್ಟು  ಮಾತಿಗೊಮ್ಮೆ ’ಹೋಗ್ತೀವಿ,ಹೋಗ್ತೀವಿ ನಮ್ಮನ್ನ ಬಿಟ್ಬಿಡಿ’ ಅನ್ನೋ ಕಾಶ್ಮೀರಿಗಳನ್ನ ನಾವ್ಯಾಕೆ ಹಿಡಿದು ಕೂರ್ಬೇಕು ಅಂತ ಒಂದು ಪ್ರಶ್ನೆಯು ಸದ್ದಿಲ್ಲದೆ ಮನದಲ್ಲಿ ಸುಳಿದು ಹೋಗುತ್ತದೆ,ಮರುಕ್ಷಣವೆ ಇಷ್ಟು ದಿನ ಹರಿದ ಭಾರತೀಯ ಯೋಧರ ರಕ್ತಕ್ಕೆ ಬೆಲೆ ಇಲ್ಲವೇ ಹಾಗೆ ಸುಮ್ಮನೆ ಬಿಟ್ಟು ಬಿಡಲು ಅನ್ನಿಸುತ್ತದೆ!

ಈ ಕಾಶ್ಮೀರ ಅನ್ನುವ ಕಣಿವೆಯ ರೋದನೆಯೆ ಹಾಗೆ,ಯೋಚಿಸುತ್ತ ಕುಳಿತರೆ ತಲೆ ಗಿರ್ರ್ ಅನ್ನುವಂತದ್ದು.ಅದೀಗ ಸುಲಭ ಸಾಧ್ಯವಾಗಿ ಪರಿಹಾರವಾಗಬಲ್ಲ ಸಮಸ್ಯೆಯಾಗಿ ಉಳಿದಿಲ್ಲ.ಇಂತ ಒಂದು ಶಾಶ್ವತ ಸಮಸ್ಯೆಯ ಸುಳಿಗೆ ಭಾರತವನ್ನೂ-ಕಾಶ್ಮೀರವನ್ನೂ ನೂಕಿ ಹೋದ ಬಿಳಿ ಪಾರಿವಾಳದ-ಕೆಂಪು ಗುಲಾಬಿಯ ನೆಹರೂ ಮಹಾಶಯ! ಒಂದು ಕಡೆ ಕಾಶ್ಮೀರದೊಳಗೆ ನುಗ್ಗಿ ಬಂದ ಪಾಕಿಗಳನ್ನ ಅಟ್ಟಾಡಿಸಿ ಹೊಡೆಯೋದರಲ್ಲಿ ಭಾರತದ ಯೋಧರು ತಲ್ಲೀನರಾಗಿದ್ದರೆ, ಅತ್ತ ನೆಹರೂ ಅನ್ನೋ ಯಾರ ಮಾತು ಕೇಳದೆ,ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಖುದ್ದು ದೂರದೃಷ್ಟಿಯಿಂದ ಯೋಚಿಸದೆ, ಕಡೆ ಪಕ್ಷ ತಜ್ನರ ಮಾತನ್ನು ಕೇಳದೆ ತಮ್ಮಿಷ್ಟ ಬಂದಂತೆ ಕುಣಿದಾಡಿ ಕಾಶ್ಮೀರ ಸಮಸ್ಯೆಯನ್ನ ವಿಶ್ವಸಂಸ್ಥೆಯಬಾಗಿಲಿಗೆ ತಂದು ನಿಲ್ಲಿಸಿದರು,ಅಲ್ಲಿ ಬ್ರಿಟನ್,ಅಮೇರಿಕಾದಂತ ರಾಷ್ಟ್ರಗಳು ನಿಂತಿದ್ದು ಪಾಕಿಗಳ ಬೆಂಬಲಕ್ಕೆ!, ಇದು ಹೇಗಾಯಿತೆಂದರೆ ನೆಹರೂ ’ಕಾಶ್ಮೀರಿ ಶಾಲಿನಲ್ಲಿ ಕೊಲ್ಹಾಪುರಿ ಚಪ್ಪಲಿಯನ್ನ ಇಟ್ಟು ವಿಶ್ವಸಂಸ್ಥೆಯ ಕೈಗೆ ಕೊಟ್ರು’,ಆದರೆ  ಒದೆ ತಿಂದಿದ್ದು ಭಾರತ!

ಒಂದೆಡೆ ನೆಹರೂವಿನ ವಂಶವೃಕ್ಷದ ಕೈಗೆ ಸಿಕ್ಕ ಭಾರತ ಮತ್ತೊಂದೆಡೆ ಶೇಖ್ ಅಬ್ದುಲಾ – ಸಯೀದ್ ವಂಶವೃಕ್ಷದ ಕೈಗೆ ಸಿಕ್ಕ ಕಾಶ್ಮೀರ.ವಂಶವೃಕ್ಷ ಹಾಗೂ ವ್ಯಕ್ತಿ ಪೂಜೆಯ ಫ಼ಲ ಏನೆಂದು ಅರ್ಥವಾಗಬೇಕಾದರೆ ಕಣ್ಣ ಮುಂದೆಯೆ ಇರುವ ಉದಾಹರಣೆ ಕಾಶ್ಮೀರ,ಭಾರತ ಮತ್ತು ಕಾಂಗ್ರೆಸ್ಸ್ ಅನ್ನೋ ನೆಹರೂ (ನಕಲಿ ಗಾಂಧಿಗಳ?) ಪಕ್ಷ!

ಅಬ್ದುಲ್ಲಾ ವಂಶವೃಕ್ಷದ ಕುಡಿ ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ಶ್ರೀ ನಗರದ ಲಾಲ್ ಚೌಕ್ನಲ್ಲಿ ಜನವರಿ ೨೬ರಂದು ರಾಷ್ಟ್ರಧ್ವಜ ಹಾರಿಸುತ್ತೆವೆಂಬ ಬಿ.ಜೆ.ಪಿ ಹೇಳಿಕೆಗೆ ಕಿಡಿಕಾರಿದ್ದಾರೆ.ಈಗಾಗಲೆ ಜುಲೈನಲ್ಲಿ ಶುರುವಾಗಿ ಸತತ ಮೂರು ತಿಂಗಳು ಉರಿದು ಜೀವಗಳನ್ನು ಬಲಿ ತೆಗೆದುಕೊಂಡು ಕಡೆಗೆ ಮತ್ತದೆ ಎಂದಿನ ಬೂದಿ ಮುಚ್ಚಿದ ಕೆಂಡದಂತೆ ಕುಳಿತಿರುವ ಕಾಶ್ಮೀರವೆಂಬ ಒಲೆಗೆ ಈ ಗಣರಾಜ್ಯದಂದು ಮತ್ತೆ ಕೊಳವೆ ಊದಿ ಬೆಂಕಿ ಹಚ್ಚಬೇಡಿ ಅನ್ನುವ ಧಾಟಿಯಲ್ಲಿ ಮಾತಾಡಿದ್ದಾರೆ.ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದರೆ ಏನಾಗಬಹುದು ಅನ್ನುವುದಕ್ಕೆ ಕಾಶ್ಮೀರ ಹೊತ್ತಿ ಉರಿದ ಆ ಮೂರು ತಿಂಗಳು ಈ ಅನನುಭವಿ ಹುಡುಗ ತಿಣುಕಾಡಿದ ಪರಿ ನೋಡಿಯಾದರು ನಮ್ಮ ಜನ ಈ ವಂಶವೃಕ್ಷದ ಬೀಜವನ್ನ ಇನ್ಮೇಲೆ ಮೊಳಕೆಯಲ್ಲೇ ಚಿವುಟಿ ಹಾಕಲಿ.fine, ಈ ವಂಶವೃಕ್ಷದ ಬಗ್ಗೆ ಮಾತಡುವುದು ಸದ್ಯ ನನ್ನ ಉದ್ದೇಶವಲ್ಲ.

ಬಿ.ಜೆ.ಪಿ ರಾಜಕೀಯ ಹಿತಾಸಕ್ತಿಯೆಲ್ಲವನ್ನು ಬದಿಗಿಟ್ಟು ಒಮ್ಮೆ ನೋಡಿದಾಗ ಅಸಲಿಗೆ ಈ ಒಮರ್ ಅಬ್ದುಲ್ಲಾ ರಾಷ್ಟ್ರಧ್ವಜವನ್ನ ಹಾರಿಸಬೇಡಿ ಅನ್ನುವುದು ಪ್ರತ್ಯೇಕತಾವಾದಿಗಳಿಗೆ,ದೇಶ ದ್ರೋಹಿ ಹುರಿಯತ್ಗೆ,ಉಗ್ರಗಾಮಿಗಳಿಗೆ ತಲೆಬಾಗಿದಂತಲ್ಲವೆ?  ಹಾಗೆ ಈ ವಿಷ್ಯದಲ್ಲಿ ಇನ್ನ ಕೇಂದ್ರದ ನಿರ್ಧಾರವು ಒಮರ್ ಮಾತಿಗೆ ಬೆಂಬಲ ಸೂಚಿಸುವಂತೆಯೆ ಇದೆ.ಇನ್ನ ಚಿದಂಬರಂ ಜೈ ಅನ್ನುವರೋ ಇಲ್ವೊ ಕಾದು ನೋಡಬೇಕಿದೆ.ತಮ್ಮ ಬುಡಕ್ಕೆ ಬತ್ತಿ ಇಡಲು ಬಂದಿದ್ದ ಅಫ಼್ಜಲ್ನನ್ನೆ ಪುಡಿ ವೋಟಿನ ಆಸೆಗೆ ಬಿದ್ದು ಫ಼ಾರಂ ಹಂದಿ ಮರಿ ಸಾಕಿದಂತೆ ಸಾಕಿಕೊಂಡಿರೋ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಹೇಗಿರಬಹುದು ಎಂದು ಸುಲಭವಾಗೆ ಊಹಿಸಬಹುದು.ಈ ಅಫ಼್ಜಲ್ ಸಲ್ಲಿಸಿದ ಕ್ಷಮಾಪಣ ಅರ್ಜಿಯು ತಮ್ಮ ಬಳಿ ಬಂದಿಲ್ಲ ಅಂತ ರಾಷ್ಟ್ರಪತಿಗಳ ಕಾರ್ಯಲಯ ಮೊನ್ನೆ ಮಾಹಿತಿ ಹಕ್ಕುದಾರನ ಅರ್ಜಿಯಲ್ಲಿ ಹೇಳಿದೆ,ಹಾಗಿದ್ದರೆ ಆ ಅರ್ಜಿ ಎಲ್ಲಿ ಹೋಯಿತು? ಮತ್ತು ಈ ಗಡವನನ್ನ ಸಾಕಲು ಇನ್ನ ಎಷ್ಟು ದಿನ ನಾವು ನಮ್ಮ ತೆರಿಗೆ ಹಣ ಪೋಲು ಮಾಡಬೇಕು ಅನ್ನುವುದು ಸದ್ಯ ಚಿದಂಬರ ರಹಸ್ಯ! ಕಾನೂನು ಸುವ್ಯವಸ್ಥೆ ಹದಗೆಡಬಹುದು ಅನ್ನೋ ದಿಗಿಲನ್ನು ವ್ಯಕ್ತಪಡಿಸೋ ಕೇಂದ್ರ ಹಾಗೂ ಕಾಶ್ಮೀರ ಸರ್ಕಾರಗಳಿಗೆ ತಮ್ಮ ಮಾತು ದೌರ್ಬಲ್ಯದ ಸಂಕೇತ ಅನ್ನಿಸುವುದಿಲ್ವಾ?

ಹೌದು! ರಾಷ್ಟ್ರಧ್ವಜವನ್ನೇ ಹಾರಿಸಲಾಗದ ರಾಜ್ಯವೇಕೆ ಬೇಕು? ಅನ್ನುವ ಪ್ರಶ್ನೆ ಮೂಡೂತ್ತದಾದರೂ ತೀರ ಆ ಉಗ್ರಗಾಮಿಗಳಿಗಿಂತ ಅತಿ ಉಗ್ರವಾಗಿ ಭಾರತದ ಸಂವಿಧಾನದ ಅಡಿಯಲ್ಲಿ ಗೆದ್ದು ಬಂದು ಗದ್ದಿಗೆಯ ಮೇಲೆ ಕುಳಿತ ಫ಼ಾರೂಕ್ ಅಬ್ದುಲ್ಲರ ಮುದ್ದು ಕಂದನಿಗೆ ಹೆಚ್ಚು ಸಿಟ್ಟು ಬಂದಿರುವಂತೆ ಕಾಣುತ್ತಿದೆ.ಅಷ್ಟಕ್ಕೂ ಇದೆ ಮೊದಲ ಬಾರಿಯೇನು ಅಲ್ಲಿ ರಾಷ್ಟ್ರಧ್ವಜ ಹಾರಿಸಲು ಹೋಗುತ್ತಿದ್ದಾರ ಅಂತ ನೋಡ ಹೋದರೆ ಹಿಂದೆಲ್ಲ ಭಾರತೀಯ ಸೇನೆಯು ಮಾರ್ಚಿಂಗ್ ಮಾಡಿ ಅಲ್ಲಿ ಧ್ವಜ ಹಾರಿಸುತ್ತಿತ್ತು.ಲಾಲ್ಚೌಕ್ನಲ್ಲಿ ಭಾರತದ ಧ್ವಜ ಹಾರಲು ಆರಂಭವಾದದ್ದು 1991ರಲ್ಲಿ. ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ‘ಏಕತಾ ಯಾತ್ರೆ’ ಹೆಸರಿನಲ್ಲಿ ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ಯಾತ್ರೆ ಮಾಡಿ ಸಾಂಕೇತಿಕವಾಗಿ ಧ್ವಜ ಹಾರಿಸಿದ್ದರು. ಅಂದಿನಿಂದ ನಿರಂತರ 19 ವರ್ಷಗಳ ಕಾಲ ಹಾರುತ್ತಿದ್ದ ಧ್ವಜವನ್ನ ಕಳೆದ ವರ್ಷ ಅಮರನಾಥ ಯಾತ್ರೆಯ ಬಿಸಿಯಿಂದಾಗಿ ಹಾರಿಸಲು ಬಿಟ್ಟಿರಲಿಲ್ಲ.

ಕೇಂದ್ರ ಸರಕಾರ ಉಳಿದೆಲ್ಲಾ ರಾಜ್ಯಗಳಿಗೆ ನೀಡುತ್ತಿರುವ ತಲಾವಾರು ನೆರವಿನ ಮೊತ್ತಕ್ಕಿಂತ ರೂ.೮,೦೦೦ ದಷ್ಟು ಹೆಚ್ಚು ಕಾಶ್ಮೀರಕ್ಕೆ ಕೊಡುತ್ತಿದೆ. ರೈಲು, ರಸ್ತೆ, ಇಂಧನ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಸುಮಾರು 25,000 ಕೋಟಿ ರೂ. ಕೇಂದ್ರ ನೆರವಿನ ಯೋಜನೆಗಳು ಅಲ್ಲಿ ಅನುಷ್ಟಾನದಲ್ಲಿವೆ. ಅಲ್ಲಿ ಜಾರಿಯಲ್ಲಿರುವ ಪಂಚವಾರ್ಷಿಕ ಯೋಜನೆಯ 11 ಸಾವಿರ ಕೋಟಿ ರೂಗಳನ್ನು ನೀಡಿರುವುದು ಕೇಂದ್ರವೇ.ಕಾಶ್ಮೀರವನ್ನು ಭಾರತದಲ್ಲಿಯೇ ಉಳಿಸಿಕೊಳ್ಳಲು ಪ್ರತಿಯೊಬ್ಬ ಭಾರತೀಯ ನೀಡುತ್ತಿರುವ ಕೊಡುಗೆ ಇದು.ಇಂತ ರಾಷ್ಟ್ರದ ರಾಷ್ಟ್ರಧ್ವಜ ಅಲ್ಲಿ ಹಾರಬಾರದಾ?

ಮುಂದುವರಿಯುವುದು…..

22 ಟಿಪ್ಪಣಿಗಳು Post a comment
  1. ನಮ್ಮ ರಾಷ್ಟ್ರ ಧ್ವಜವನ್ನು ಕಂಡು ಉರಿದು ಬೀಳುವವರೂ ನಮ್ಮವರೇ?
    ಅವರನ್ನು ಓಲೈಸಿ ಅಧಿಕಾರದಲ್ಲಿ ಮುಂದುರಿಯುವವರೂ ನಮ್ಮವರೇ?
    ವಿಚಿತ್ರ ದೇಷ ಕಣ್ರೀ ನಮ್ಮದು!

    ಉತ್ತರ
  2. Kumara S
    ಜನ 17 2011

    ರಾಕೇಶ್,
    …. ನಿಮ್ಮ ಲೇಖನ ಸಂದರ್ಭ ಸಹಿತಾವಾಗಿ ಚೆನ್ನಾಗಿ ಇದೆ…. ನಿಮ್ಮ ಮುಂದಿನ ಲೇಖನ ಓದಲು ಕಾಯುತಿದ್ದೇನೆ…

    ….ನೀವು ಹೇಳಿರೋದು ನಿಜ….ಕಾಶ್ಮೀರ ತರಹದ ಸಮಸ್ಯೆಗಳು ನಮ್ಮ ದೇಶದಲ್ಲಿ ಮಾತ್ರ ಕಾಣೋದಕ್ಕೆ ಸಧ್ಯ ಅನ್ಸತ್ತೆ !….. ನಮ್ಮ ಕೇಂದ್ರ ಸರ್ಕಾರದ ಕೃಪಾಪೋಷಿತ ಉಗ್ರಗಾಮಿಗಳು ನಮ್ಮ ಸೈನಿಕರ ,ಜನರ ಪ್ರಾಣ ತೆಗಿತ ಇದ್ದಾರೆ ಈ ಕಾಂಗ್ರೆಸ್ ಸರ್ಕಾರ ಅವರನ್ನ ಪೋಷಿಸ್ತ ಇದೆ….. ಅರುಂದತಿ ರಾಯ್ ನಂತಹ ವ್ಯಕ್ತಿಗಳನ್ನ ಇನ್ನು ದೇಶದಿಂದ ಗಡಿಪಾರು ಮಾಡದೆ ಇಟ್ಕೊಂಡು ಕೂತಿದೆ ಅಂದ್ರೆ ಏನ್ ಹೇಳೋದು ಇವರ ಪ್ರಾಮಾಣಿಕತೆಗೆ ಮತ್ತು ದೆಶಾಭಿಮಾನಕ್ಕೆ!…..

    …..ಕಾಶ್ಮೀರ ನಮ್ಮದು ಅಂಡ್ ಪ್ರತಿಯೊಬ್ಬ ಭಾರತಿಯನದು !!!

    ಉತ್ತರ
  3. ಜನ 18 2011

    Rakesh,
    Hats off for ur timely article.. Intavrindane namma desha eege agirodu.

    ಉತ್ತರ
  4. sujith shetty
    ಜನ 18 2011

    Rakesh
    good article. superb .
    heege munduvariyali

    ಉತ್ತರ
  5. veekay
    ಜನ 19 2011

    I wonder who will question their acts???
    anyways, your article is nice one,

    keep posting.

    ಉತ್ತರ
  6. ಮೋಹನ
    ಜನ 23 2011

    ತಪ್ಪು, ಕಾಶ್ಮೀರ ಎಂದೆಂದಿಗೂ ಭಾರತದ ಭಾಗವಾಗಿರ್ಲಿಲ್ಲ. ಈಗಲೂ ಆಗಿಲ್ಲ. ಕೇವಲ ಭಾರತದ ದೌರ್ಜನ್ಯದಿಂದ ಅದು ಭಾರತದ ಹಿಡಿತದಲ್ಲಿದೆ. ಅದು ಭಾರತಕ್ಕೆ ಸೇರ್ಬೇಕಾದ್ರೆ ಅವರಿಗೆ ಕೊಟ್ಟ ವಚನಗಳೇನು? ಅದನ್ನು ಪಾಲಿಸಲಾಗಿದೆಯೆ? ಇವೆಲ್ಲವನ್ನು ತಿಳಿದು ನಡೆಯುವುದು ಒಳ್ಳೆಯದು

    ಉತ್ತರ
  7. @ಮೋಹನ್,
    ಭಾರತ ಕಾಶ್ಮೀರಿಗಳಿಗೆ ದೌರ್ಜನ್ಯ ಮಾಡಿದೆ ಅನ್ನುವ ಮಾತೇ ಸುಳ್ಳು.ಅವರಿಗೆ ವಚನ ಕೊಟ್ಟು ಯಡವಟ್ಟು ಮಾಡಿದ್ದು ಇದೆ ನೆಹರೂ ಮಹಾಶಯ ಎಂಬುದು ತಮಗೆ ತಿಳಿದಿದೆ ಅಂದುಕೊಂಡಿದ್ದೆನೆ.
    ಈ ಲೇಖನದ ಎರಡನೇ ಭಾಗದಲ್ಲಿ ನಿಮ್ಮ ಪ್ರತಿಕ್ರಿಯೆಗೆ ಉತ್ತರ ಸಿಗುವುದು, ಓದಿ ನೋಡಿ.ನಂತರ ಮಾತನಾಡುವ.

    @ ಓದಿ ಮೆಚ್ಚಿದ ಆಸು ಹೆಗ್ಡೆ,ಕುಮಾರ್,ಆದೇಶ್,ಸುಜಿತ್,ವೀಕೇ ಅವರಿಗೆ ನನ್ನಿ 🙂

    ಉತ್ತರ
  8. ಮೋಹನ
    ಜನ 25 2011

    ನೆಹ್ರು ಆಗ್ಲಿ ಯಾರೆ ಆಗ್ಲಿ, ಮಾತು ಸರ್ಕಾರ ಕೊಟ್ಟಿತು. ಅದರಂತೆ ನಡೆದು ಕೊಳ್ಳಬೇಕಿತ್ತು. ಅಶ್ಟೆ. ಅದಿಲ್ಲದೆ ಈಗ ಧ್ವಜ ಹಾರಿಸೋದ್ಯಾಕೆ? ಕಾಶ್ಮೀರ ಮರೆತು ಮುಂದೆ ಹೋಗುವುದು ಒಳ್ಳೆಯದು.

    ಉತ್ತರ
    • ತಪ್ಪುಗಳನ್ನ ಸರಿಪಡಿಸಬೇಕಾಗಿರುವುದು ಕರ್ತವ್ಯ.ನೆಹರೂ ಮಹಾಶಯನ ತಪ್ಪುಗಳನ್ನ ತಿದ್ದಬೇಕು,ಕಾಶ್ಮೀರ ನಮ್ಮೊಂದಿಗೆ ಉಳಿಯುವುದಾದರೆ ಅದು ಉಳಿದ ರಾಜ್ಯಗಳಂತೆಯೇ ಇರಬೇಕು.ನನ್ನ ಎರಡನೆ ಲೇಖನದಲ್ಲಿ ಇದರ ಬಗ್ಗೆಯೇ ಮಾತಾಡಿದ್ದೇನೆ.

      ಉತ್ತರ
  9. ಮೋಹನ
    ಜನ 26 2011

    ಅಂತೂ ರಾಷ್ಟ್ರಧ್ವಜ ಹಾರದಿರುವಂತೆ ಎಚ್ಚರದಿಂದ ನೋಡಿಕೊಂಡ ಪ್ರಧಾನಿಗೂ, ಸೂಪರ್ ಪ್ರಧಾನಿಗೂ, ಮರಿ ಪ್ರಧಾನಿಗೂ ಅಭಿನಂದನೆ ಸಲ್ಲಿಸೋಣವೆ?

    ಉತ್ತರ
    • ಅಭಿನಂದನೆಯೇ?
      ಬಿ.ಜೆ.ಪಿಯವರ ಯಾತ್ರೆಯ ಹಿಂದಿನ ರಾಜಕೀಯ ಅಜೆಂಡಾ ಏನೇ ಇರಲಿ,ಲಾಲ್-ಚೌಕದಲ್ಲಿ ಧ್ವಜಾರೋಹಣ ವಿಷಯದಲ್ಲಿ ಒಮರ್ ಅಬ್ದುಲ್ಲ ಮತ್ತು ಕೇಂದ್ರ ಸರ್ಕಾರದ ನಡೆ ಸರಿಯಲ್ಲ.ಈ ವಿಷಯಕ್ಕೆ ಒಮರ್ ನೀಡಿದ ಅತಿ ಹೆಚ್ಚು ಮಹತ್ವದಿಂದಲೇ ಏನಾದರು ಅನಾಹುತವಾಗಬಹುದಿತ್ತೇನೋ.ಆದರು ನಮ್ಮ ದೇಶದ ನೆಲದಲ್ಲಿ ನಮ್ಮ ಧ್ವಜ ಹಾರದಿದ್ದು ಮತ್ತು ಅದನ್ನ ತಡೆದವೆಂದು ಜಯದ ನಗೆ ಬೀರಿದ ಜನರ ಅವಿವೇಕತನಕ್ಕೆ ನನಗೆ ಮರುಕವಿದೆ.ನನ್ನ ಲೇಖನದಲ್ಲೇ ಹೇಳಿರುವಂತೆ ಕಾಶ್ಮೀರವನ್ನ ಗೋಜಲು ಮಾಡುವುದೇ ಭಾವನಾತ್ಮಕ ಮತ್ತು ಅನಗತ್ಯವಾದ ಓಲೈಕೆಯ ನಡೆಗಳು.

      ಉತ್ತರ
      • ಮೋಹನ
        ಜನ 28 2011

        ಸರಿಯಾಗಿ ಹೇಳಿದಿರಿ, ಭಾವನಾತ್ಮಕವೆಂಬುದು ಸರಿಯಾದ ಪದ. ಹಾಗೆ ನೋಡದೆ ನೇರವಾಗಿ ನೋಡಿ ಕಾಶ್ಮೀರದಿಂದ ಮುನ್ನದೆಯುವುದು ಮೇಲು.

        ಉತ್ತರ
  10. Narendra Kumar.S.S
    ಜನ 28 2011

    > ಮೋಹನ್: ತಪ್ಪು, ಕಾಶ್ಮೀರ ಎಂದೆಂದಿಗೂ ಭಾರತದ ಭಾಗವಾಗಿರ್ಲಿಲ್ಲ.
    ಕಾಶ್ಮೀರ ಹಿಂದೆ ಭಾರತದ ಭಾಗವಾಗಿರಲಿಲ್ಲ ಎನ್ನುವವರಿಗೆ, ಹಿಂದಿನ ಅನೇಕ ಶತಮಾನಗಳ ಭಾರತದ ಭೂಪಟದ ಕೊಂಡಿಗಳನ್ನು ನೀಡುತ್ತಿದ್ದೇನೆ.
    ಮಹಾಭಾರತ ಯುದ್ಧದಲ್ಲೂ ಕಾಶ್ಮೀರದ ರಾಜಕುಮಾರ ಭಾಗವಹಿಸಿದ್ದ ದಾಖಲೆಗಳಿವೆ.
    ಭೂಪಟಗಳಿಗೆ ಈ ಕೆಳಗಿನ ಕೊಂಡಿಗಳನ್ನು ನೋಡಿ:
    1. http://dsal.uchicago.edu/maps/gazetteer/images/gazetteer_frontcover.jpg – this map is from the gazette and it is official.
    2. http://www.emersonkent.com/map_archive/india_1700.htm
    3. http://www.emersonkent.com/map_archive/india_1783.htm
    4. http://www.emersonkent.com/map_archive/india_1857.htm
    5. http://www.britishempire.co.uk/images3/india1857.jpg
    6. http://www.britishempire.co.uk/images3/northernindia1857.jpg
    7. http://upload.wikimedia.org/wikipedia/commons/e/e4/EpicIndia.jpg – Map of India during Mahabharat war
    8. http://www.gwu.edu/~religion/resources/…/Jackie%20Abdalla‘s%20appendices.doc – During the Gupta Period and Huen Tsang
    9. http://upload.wikimedia.org/wikipedia/commons/8/8e/Maurya_india.png – During Mauryas
    10. http://www.fsmitha.com/h1/map06ind.htm – During 500 B.C

    > ಮೋಹನ್: ಕೇವಲ ಭಾರತದ ದೌರ್ಜನ್ಯದಿಂದ ಅದು ಭಾರತದ ಹಿಡಿತದಲ್ಲಿದೆ. ಅದು ಭಾರತಕ್ಕೆ ಸೇರ್ಬೇಕಾದ್ರೆ ಅವರಿಗೆ ಕೊಟ್ಟ
    > ಮೋಹನ್: ವಚನಗಳೇನು? ಅದನ್ನು ಪಾಲಿಸಲಾಗಿದೆಯೆ?
    ಹೇಳಿ ಮೋಹನ್, ಯಾವ ವಚನಗಳನ್ನು ಇಡಲಾಗಿತ್ತು?
    ನನಗೆ ತಿಳಿದಿರುವಂತೆ ರಾಜಾ ಹರಿಸಿಂಗ್ ಯಾವುದೇ ಶರತ್ತುಗಳಿಲ್ಲದೆ ಭಾರತದೊಂದಿಗೆ ವಿಲೀನಪತ್ರಕ್ಕೆ ಸಹಿ ಹಾಕಿದ್ದ.
    ನಿಮ್ಮ ಮಾತಿಗೆ ಆಧಾರವಿದ್ದರೆ ದಯವಿಟ್ಟು ನೀಡಿ – ನಾವೂ ತಿಳಿದುಕೊಳ್ಳೋಣ.

    ಉತ್ತರ
  11. Narendra Kumar.S.S
    ಜನ 28 2011

    > ಮೋಹನ್: ತಪ್ಪು, ಕಾಶ್ಮೀರ ಎಂದೆಂದಿಗೂ ಭಾರತದ ಭಾಗವಾಗಿರ್ಲಿಲ್ಲ.
    ಕಾಶ್ಮೀರ ಭಾರತದ ಭಾಗವಾಗಿರಲಿಲ್ಲವೆಂದವರಿಗೆ ಕಳೆದ ಕೆಲವು ಶತಮಾನಗಳ ಭಾರತದ ಭೂಪಟದ ವಿವರಗಳನ್ನುಲ್ಲಿ ನೀಡುತ್ತಿರುವೆ.
    ಮಹಾಭಾರತ ಯುದ್ಧದಲ್ಲೂ ಕಾಶ್ಮೀರದ ರಾಜ ಭಾಗವಹಿಸಿದ್ದ ಉಲ್ಲೇಖವಿದೆ.
    ಭೂಪಟಗಳಿಗಾಗಿ ಈ ಕೆಳಗಿನ ಕೊಂಡಿಗಳನ್ನು ನೋಡಿ:
    1. http://dsal.uchicago.edu/maps/gazetteer/images/gazetteer_frontcover.jpg – this map is from the gazette and it is official.
    2. http://www.emersonkent.com/map_archive/india_1700.htm
    3. http://www.emersonkent.com/map_archive/india_1783.htm
    4. http://www.emersonkent.com/map_archive/india_1857.htm
    5. http://www.britishempire.co.uk/images3/india1857.jpg
    6. http://www.britishempire.co.uk/images3/northernindia1857.jpg
    7. http://upload.wikimedia.org/wikipedia/commons/e/e4/EpicIndia.jpg – Map of India during Mahabharat war
    8. http://www.gwu.edu/~religion/resources/…/Jackie%20Abdalla‘s%20appendices.doc – During the Gupta Period and Huen Tsang
    9. http://upload.wikimedia.org/wikipedia/commons/8/8e/Maurya_india.png – During Mauryas
    10. http://www.fsmitha.com/h1/map06ind.htm – During 500 B.C

    > ಮೋಹನ್: ಕೇವಲ ಭಾರತದ ದೌರ್ಜನ್ಯದಿಂದ ಅದು ಭಾರತದ ಹಿಡಿತದಲ್ಲಿದೆ. ಅದು ಭಾರತಕ್ಕೆ ಸೇರ್ಬೇಕಾದ್ರೆ ಅವರಿಗೆ ಕೊಟ್ಟ
    > ಮೋಹನ್: ವಚನಗಳೇನು? ಅದನ್ನು ಪಾಲಿಸಲಾಗಿದೆಯೆ?
    ಹೇಳಿ ಮೋಹನ್, ಯಾವ ವಚನಗಳನ್ನು ಭಾರತ ಪಾಲಿಸಿಲ್ಲವೆಂದು?
    ನನಗೆ ತಿಳಿದಿರುವಂತೆ, ರಾಜಾ ಹರಿಸಿಂಗ್ ಭಾರತದೊಡನೆ ವಿಲೀನ ಪತ್ರಕ್ಕೆ ಸಹಿ ಹಾಕಿದಾಗ ಯಾವ ಶರತ್ತನ್ನೂ ಹಾಕಿರಲಿಲ್ಲ.
    ನಿಮಗೆ ಅದರ ಕುರಿತಾಗಿ ಹೆಚ್ಚಿನ ಮಾಹಿತಿ ತಿಳಿದಿದ್ದರೆ ತಿಳಿಸಿ – ನಾವೂ ತಿಳಿದುಕೊಳ್ಳೋಣ.

    ಉತ್ತರ
  12. ರವಿ
    ಜನ 29 2011

    @ಮೋಹನ್ , ವಿಚಿತ್ರ ಅನ್ನಿಸ್ತಿದೆ ನಿಮ್ಮ ವಾದ ನೋಡಿ ……ಕೇವಲ ಬಿ ಜೆ ಪಿ ದ್ವಜಾರೋಹಣ ಮಾಡ ಹೊರಟಿತು ಎನ್ನುವುದನ್ನು ಮನಸ್ಸಿನಿಂದ ತೆಗೆದು ಹಾಕಿ ಸ್ವಲ್ಪ ಯೋಚಿಸಿ ಹೇಳಿ. ನಿಮ್ಮ ಆಸ್ತಿ (ಜಾಗ/ನೆಲ) ಯನ್ನು ಯಾರಾದರು ಅತಿಕ್ರಮಣ ಮಾಡ ಹೊರಟರೆ ನೀವು ಸುಮ್ಮನಿರುತ್ತೀರೆಂದು ನನಗನಿಸುವುದಿಲ್ಲ (ನೀವು ಮಾತ್ರವಲ್ಲ ಯಾರೇ ಆದರೂ). ಹಾಗಯೇ ಇದು ರಾಷ್ಟ್ರದ ಸಾರ್ವಬೌಮದ ಪ್ರಶ್ನೆ. ಇವತ್ತು ಕಾಶ್ಮೀರ ನಾಳೆ ? ಅದು ಹೀಗೆ ಮುಂದುವರಿಯುತ್ತದೆ ಅಸ್ಟೇ .

    ಹೀಗೆ ನಾವು ನಾವೇ ಕಚ್ಚಾಡುವುದರಿಂದ (ಬಿನ್ನಾಬಿಪ್ರಾಯ ವ್ಯಕ್ತ ಪಡಿಸೋದರಿಂದ ) ನೀವು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಬೆಂಬಲ ಕೊಟ್ಟಂತಾಗುತ್ತದೆ ಎಂದೆನಿಸುತ್ತದೆ. ಅರುಂದತಿ ರೋಯ್ ರಂತಹವರು ಕೆಲವರು ಇದ್ದರೆ ಸಾಕು ದೇಶದ ಸಾರ್ವಬೌಮತೆ, ಒಗ್ಗಟ್ಟು ಹಾಳಾಗಲು . ಆದ್ದರಿಂದ ರಾಷ್ಟ್ರದ ವಿಷಯ ಬಂದಾಗ ಪಕ್ಷವನ್ನು/ ಜಾತಿಯನ್ನು ಹೊರಗಿಟ್ಟು ಯೋಚಿಸುವುದು ಸರಿಯಾದೀತು. ಇಲ್ಲವಾದಲ್ಲಿ ಇನ್ನೊಮ್ಮೆ ನಾವು ಸ್ವತಂತ್ರ ಕ್ಕಾಗಿ ಹೋರಾಟ ಮಾಡಬೇಕಾಗಿ ಬಂದರೂ ಆಶ್ಚರ್ಯವಿಲ್ಲ .!!!!

    ಉತ್ತರ
  13. indian
    ಜನ 29 2011

    @ mohan=>ಅಂತೂ ……..”ರಾಷ್ಟ್ರಧ್ವಜ ಹಾರದಿರುವಂತೆ”…………. ಎಚ್ಚರದಿಂದ ನೋಡಿಕೊಂಡ ಪ್ರಧಾನಿಗೂ, ಸೂಪರ್ ಪ್ರಧಾನಿಗೂ, ಮರಿ ಪ್ರಧಾನಿಗೂ ಅಭಿನಂದನೆ ಸಲ್ಲಿಸೋಣವೆ?.

    ohh great being indian(=> strongly suspect/doubt) such a comment………….
    about this comment no body raising voice…..intead many people trying to convince by one or other way…is it not a crime ….leave apart all political parties. Atleast oppose him or punish him by law.
    ate indian food, salt…drunk indian water talking against and all others are ignorant about………

    hate all…..

    ಉತ್ತರ
  14. ಮೋಹನ
    ಜನ 31 2011

    ರಾಜಾ ಹರಿಸಿಂಗನಿಗೆ ಕೊಟ್ಟಮಾತಲ್ಲ, ಅಬ್ದುಲ್ಲ ತಂದೆಗೆ ಕೊಟ್ಟ ಮಾತು.ವಿಲೀನಕ್ಕೆ ಆತ ವಿಧಿಸಿದ ಶರತ್ತುಗಳೇನು ಗೂಗಲಿಸಿ ನೋಡಿ.
    ನರೇಂದ್ರಕುಮಾರರೆ,
    ಅದಕ್ಕೆ ಮುಂಚೆ ಅಫ್ಘಾನಿಸ್ತಾನವೂ ಭಾರತದ ಭಾಗವಾಗಿತ್ತು ಪುರಾವೆ ಕೊಡಲೇನು? ಪ್ರಾಗ್ ಜೋತಿಷಪುರ ಈಗಿನ ಇಂಡೋನೇಷಿಯಾ ಕೂಡ ಭಾರತದ ಭಾಗವಾಗಿತ್ತು. ಅದಕ್ಕೇನಂತೀರಿ?

    ಉತ್ತರ
  15. ಮೋಹನ
    ಜನ 31 2011

    @indian
    ಎಂತಹ ಮಹಾನ್ ದೇಶಭಕ್ತರು ತಾವು. “Atleast oppose him or punish him by law.” ಎನ್ ಮುತ್ತು ಉದುರಿಸಿದ್ದಿರಿ ಸಾರ್? ನನ್ನನ್ನು ಶಿಕ್ಷಿಸಲು ಹೇಳುವ ತಮಗೆ ತಾಕತ್ತಿದ್ದರೆ ಧ್ವಜ ಹಾರಿಸಲು ಬಿಡದವರ ಮೇಲೆ ಪ್ರಕರಣ ದಾಖಲಿಸಿ ನೋಡೋಣ. ದೇಶದ ತುಂಬೆಲ್ಲ ಪ್ರಕರಣಗಳು ದಾಖಲಾಗಲಿ ಪ್ರಕರಣಗಳ ದಾಖಲೆಯೆ ಒಂದು ಒತ್ತಡವಾಗಿ ತಡೆದು ಕೊಳ್ಳದಂತಾಗಲಿ. ಇಲ್ಲಿ ಇಂಡಿಯನ್ ಎಂದು ಬೊಗಳೆ ಬಿಡುವುದರಿಂದ ಎನೂ ಮಾಡಲು ಸಾಧ್ಯವಿಲ್ಲ.

    ಉತ್ತರ
  16. indian
    ಫೆಬ್ರ 1 2011

    @mohan,

    If you want to oppose “BJP” oppose it, I have no objection. But you cant disrespect our “INDIA”. indian flag must hoisted on all national days.It applicable to kashmir also.
    Terrorists plotted attacks on various places of the world with the support of local people (may be few) like you (?) only.Unless untill people like you wont support them directly or indirectly its impossible to plot it ,it is my strong belief.
    Unless untill people like you wont stop such things attack on people “like terror attack,war etc”wont stop.

    “we can fight with enemy like terrorists/—–, But its difficult to fight enemies within us ( inside our home).”

    and Mr. Mohan while opposing also dont oppose for the sake of “political parties”. You may have any disrespect to any political parties its your wish…….but certainly it should not effect the nations integrity.
    oppose “BJP’S political gain” I support it but no one can oppose “our national flag hoisting”. It gives wrong message to enemies (ineternal and external as well).

    Govt itself should hoisted the national flag there, the problem might have vanished and would have avoided BJP taking political advantage out of it, Why GOVT not did that?
    people like you are people who spit on them selves,thinking that they doing great job,
    Also they think that who supprts Indian flag hoist there are only the follower of “BJP”.

    ಉತ್ತರ
  17. ಫೆಬ್ರ 1 2011

    Felt glad. A healthy discussion is going on. Let it continue. Me too try to contribute on the matter.

    ಉತ್ತರ
  18. ಮೋಹನ
    ಫೆಬ್ರ 1 2011

    @indian
    ಮೊದಲು ನಿಮಗಿರುವ ಗೊಂದಲಗಳಿಂದ ಹೊರಬನ್ನಿ, ನೀವು ಏನು ಹೇಳಬೇಕೆಂದಿರುವಿರಿ ಅದನ್ನು ಮೊದಲು ನಿಮಗೆ ಸ್ಪಷ್ಟಗೊಳಿಸಿಕೊಳ್ಳಿ. ನಾನು ಬಿಜೇಪಿಯ ವಿಷಯವನ್ನು ಎಲ್ಲೂ ಪ್ರಸ್ತಾಪಿಸಿಲ್ಲ. ನನ್ನ ಪ್ರಶ್ನೆಗೆ ನೀವೆಲ್ಲೂ ಏನೂ ಹೇಳಲೇ ಇಲ್ಲ. ಸುಕಾಸುಮ್ಮನೆ ಪ್ರತಿಕ್ರಿಯೆ ಬರೆಯುತ್ತ ತಮ್ಮ ಅಕ್ಷರ ಜ್ಞಾನವನ್ನು ಪ್ರದರ್ಶಿಸುತ್ತಿದ್ದಿರಿ ಎಂಬುದನ್ನು ಬಿಟ್ಟರೆ ನಿಮ್ಮ ಪ್ರತಿಕ್ರಿಯೆಯಲ್ಲಿ ಎನೂ ಇಲ್ಲ. ದಯವಿಟ್ಟು ಕ್ಷಮಿಸಿ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments